ಅಸ್ಸಾಮಿಯಾ
ಅಸ್ಸಾಮಿ ಭಾಷಾಪತ್ರಿಕೆಗಳಲ್ಲಿ ಪ್ರಭಾವವನ್ನು ಬೀರಿದ ಪತ್ರಿಕೆ. ದಿಬ್ರುಘರ್‍ನಲ್ಲಿ 1918ರಲ್ಲಿ ಸ್ಥಾಪಿತವಾಯಿತು. ಒಂದು ವಾರಪತ್ರಿಕೆ ಸುಪ್ರಸಿದ್ಧ ಅಸ್ಸಾಮಿ ಕವಿಗಳಾದ ಚಂದ್ರಕುಮಾರ ಅಗರವಾಲಾ ಈ ವಾರಪತ್ರಿಕೆಯನ್ನು ಸ್ಥಾಪಿಸಿ ಅಭಿವೃದ್ಧಿಗೆ ತಂದರು. ಪತ್ರಿಕೆಗೆ ಅನೇಕ ವಿಶೇಷ ಲೇಖನಗಳನ್ನು ಬರೆದು, ಬರೆಯಿಸಿ ಅಸ್ಸಾಮಿ ಓದುಗರಲ್ಲಿ ಅಭಿರುಚಿಯನ್ನುಂಟುಮಾಡಿದರು. ಪತ್ರಿಕೆ ಕೆಲವು ಕಾಲಾನಂತರ ಗೌಹತಿ ನಗರಕ್ಕೆ ಸ್ಥಳಾಂತರಗೊಂಡಿತು. ಅಲ್ಲಿಂದ ಅದರ ಪ್ರಸಾರ ಹೆಚ್ಚಿತು. ದ್ವೈವಾರ ಪತ್ರಿಕೆಯಾಗಿ, ದಿನಪತ್ರಿಕೆಯಾಗಿ, ಪುನಃ ವಾರಪತ್ರಿಕೆಯಾಗಿ ಜನಪ್ರಿಯವಾಗಿದ್ದು 1958ರಲ್ಲಿ ನಿಂತುಹೋಯಿತು. ಇದಕ್ಕೆ ಸುಪ್ರಸಿದ್ಧ ಸಾಹಿತಿಗಳೂ ಪತ್ರಿಕೋದ್ಯಮಿಗಳೂ ಆದ ದೇವಕಾಂತ ಬರುವಾ ಕೊನೆಯ ಕೆಲವು ವರ್ಷ ಸಂಪಾದಕರಾಗಿದ್ದರು.					
   (ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ